Author: thippung@gmail.com

  • Hello world!

    Welcome to WordPress. This is your first post. Edit or delete it, then start writing!

  • ಸೂಜಿ ಅಲ್ಲ ಬಾಯಿಯ ಸ್ಪ್ರೇ ಮೂಲಕ ಇನ್ಸುಲಿನ್​; ಮಧುಮೇಹಿಗಳಿಗೆ ಗುಡ್​ನ್ಯೂಸ್​ ನೀಡಿದ ಹೈದರಾಬಾದ್​ ಕಂಪನಿ

    ಪ್ರತಿ ನಿತ್ಯ ಸೂಜಿಯಿಂದ ಚುಚ್ಚಿಸಿಕೊಳ್ಳುವುದು ಸುಲಭ ವಿಚಾರವಲ್ಲ. ಇದಕ್ಕೆ ಇದೀಗ ಹೈದರಾಬಾದ್​ ಕಂಪನಿ ಪರಿಹಾರ ಕಂಡು ಹಿಡಿದಿದೆ.

    ಹೈದರಾಬಾದ್​ : ಮಧುಮೇಹ ಅನೇಕ ಮಂದಿಯನ್ನು ಕಾಡುವ ಸಾಮಾನ್ಯ ರೋಗವಾಗಿದೆ. ಅಧಿಕ ಮಧುಮೇಹ ಹೊಂದಿರುವ ಜನರು ನಿತ್ಯ ಇನ್ಸುಲಿನ್​ ಇಂಜೆಕ್ಷನ್​ ಪಡೆಯುವ ಮೂಲಕ ಇದರ ನಿಯಂತ್ರಣಕ್ಕೆ ಮುಂದಾಗುತ್ತಾರೆ.

    ಪ್ರತಿ ನಿತ್ಯ ಸೂಜಿಯಿಂದ ಈ ರೀತಿ ಚುಚ್ಚಿಸಿಕೊಳ್ಳುವುದು ಸುಲಭ ವಿಚಾರವಲ್ಲ. ಈ ಸೂಜಿಯ ನೋವಿನಿಂದ ಅನೇಕ ಬಾರಿ ರೋಗಿ ಜರ್ಜರಿತನಾಗುತ್ತಾನೆ. ಇದಕ್ಕೆ ಇದೀಗ ಹೈದರಾಬಾದ್​ ಕಂಪನಿ ಪರಿಹಾರ ಕಂಡು ಹಿಡಿದಿದೆ. ಇಂಜೆಕ್ಷನ್​ ಬದಲಾಗಿ ಬಾಯಿಯ (ಓರಲ್​) ಮೂಲಕವೇ ಸ್ಪ್ರೇ ಬಳಕೆ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.

    ಶೀಘ್ರದಲ್ಲೇ ಮಾನವರ ಮೇಲೆ ಪರೀಕ್ಷೆ: ಹೈದರಾಬಾದ್​​ನ ನೀಡಲ್​ಫ್ರೀ ಟೆಕ್ನಾಲಾಜಿ ಓಜುಲೀನ್​ ಎಂಬ ಸೂಜಿ ಮುಕ್ತವಾದ ಬಾಯಿಯ ಇನ್ಸುಲಿನ್​ ಸ್ಪ್ರೇ ಅನ್ನು ಅಭಿವೃದ್ಧಿಪಡಿಸಿದೆ. ಇದು ನೋವು ರಹಿತ ಚಿಕಿತ್ಸೆಯಾಗಿದ್ದು. ಈಗಾಗಲೇ 40 ದೇಶಗಳಲ್ಲಿ ಅಂತಾರಾಷ್ಟ್ರೀಯ ರೋಗಿಗಳು ಓಜುನಿಲ್​ ಅನ್ನು ಕಾಯ್ದಿರಿಸಿದ್ದಾರೆ ಎಂದು ನೀಡಲ್​ಫ್ರೀ ಟೆಕ್ನಾಲಾಜಿಯ ನಿರ್ದೇಶಕ ಮತ್ತು ಸಹ ಸಂಸ್ಥಾಪಕ ಸಿಎಂಡಿ ಡಾ ಕೆ ಕೋಟೆಶ್ವರ ರಾವ್​ ತಿಳಿಸಿದ್ದಾರೆ. ಈ ಸಂಸ್ಥೆ ಇದೀಗ ಈ ಔಷಧಿಯ ಸುರಕ್ಷಾ ಪರೀಕ್ಷೆಗೆ ಕೇಂದ್ರ ಔಷದ ಗುಣಮಟ್ಟ ನಿಯಂತ್ರಣ ಸಂಘಟನೆಗೆ ಅರ್ಜಿ ಸಲ್ಲಿಸಿದೆ. ಮಾನವನ ಮೇಲೆ ಔಷಧಿಯ ಪ್ರಯೋಗವನ್ನು ನಡೆಸಲು ಇದು ಕಡ್ಡಾಯವಾಗಿದೆ.

    ಕ್ಯಾನ್ಸರ್​, ಅಸ್ಟಿಯೊಪೊರೋಸಿಸ್​​, ಅಲ್ಝೈಮರ್​​ಗೂ ಸ್ಪ್ರೇ: ನೀಡಲ್​ ಫ್ರಿ ಟೆಕ್ನಾಲಜಿ ಮಧುಮೇಹಿಗಳಿಗೆ ಮಾತ್ರವಲ್ಲ, ಕ್ಯಾನ್ಸರ್​, ಅಸ್ಟಿಯೊಪೊರೋಸಿಸ್​ ಮತ್ತು ಆಲ್ಝೈಮರ್​ ರೋಗಿಗಳಿಗೆ ಸೂಜಿ ಹೊರತಾಗಿ ಔಷಧ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಸಂಸ್ಥೆ 225 ರಿಂದ 250 ಮಿಲಿಯನ್​ ಡಾಲರ್​​ ಹೂಡಿಕೆ ಯನ್ನು ಮುಂದಿನ ಕೆಲವು ವರ್ಷದಲ್ಲಿ ಮಾಡಲಿದೆ. ಸೂಜಿ ರಹಿತ ಬಾಯಿ ಮೂಲಕ ಇನ್ಸುಲಿನ್​ ಸ್ಪ್ರೆಯನ್ನು ಪ್ರಸ್ತುತ ಮಾನವ ಮತ್ತು ಪ್ರಾಣಿಗಳ ಮೇಲೆ ನೀಡಲ್​ ಫ್ರೀ ಟೆಕ್ನಾಲಾಜಿ ಅಭಿವೃದ್ಧಿಪಡಿಸಲಾಗಿದೆ.

    ಹೇಗೆ ಮಾಡಲಿದೆ ಕೆಲಸ: ವಿಶ್ವಾದ್ಯಂತ ಅನೇಕ ಬಯೋಫಾರಂ ಕಂಪನಿಗಳು ಬಾಯಿಯ ಇನ್ಸುಲಿನ್​ ಅನ್ನು ಅಭಿವೃದ್ಧಿ ಮಾಡಲಿದೆ. ಆದಾಗ್ಯೂ, ರಕ್ತಕ್ಕೆ ಸಾಕಷ್ಟು ಇನ್ಸುಲಿನ್ ಪಡೆಯುವಲ್ಲಿ ಸೀಮಿತ ಯಶಸ್ಸನ್ನು ಹೊಂದಿದ್ದಾರೆ. ಓಜುಲಿನ್​​ ಶೇ 91ರಷ್ಟು ಜೈವಿಕ ಲಭ್ಯತೆ ಇದೆ. ಇದರ ಫಲಿತಾಂಶವೂ ಸಾಮರ್ಥ್ಯದಾಯಕವಾಗಿದೆ. ಈ ಓರಲ್​ ಇನ್ಸುಲಿನ್​ ಸ್ಪ್ರೇ ಅನ್ನು ನಾಯಿ ಮತ್ತು ಬೆಕ್ಕಿನ ಮೇಲೆ 2024-25ರಲ್ಲಿ ಪ್ರಯೋಗ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

    Source : https://m.dailyhunt.in/news/india/kannada/etvbhar9348944527258-epaper-etvbhkn/suji+alla+baayiya+spre+mulaka+insulin+madhumehigalige+gud+nyus+nididha+haidaraabaadh+kampani-newsid-n553311230?listname=newspaperLanding&topic=homenews&index=7&topicIndex=0&mode=pwa&action=click

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • ಕ್ರಿಕೆಟ್ ಲೋಕದಲ್ಲಿ ಇತಿಹಾಸ ನಿರ್ಮಿಸಿದ ಭಾರತ: ವಿಶ್ವಕಪ್’ನಲ್ಲಿ ಈ ಶ್ರೇಷ್ಠ ದಾಖಲೆ ಬರೆದ ವಿಶ್ವದ ಎರಡನೇ ತಂಡವಿದು.

    World Cup 2023, Team India: 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಭಾರತ 302 ರನ್‌’ಗಳಿಂದ ಎರಡನೇ ಅತಿ ದೊಡ್ಡ ಗೆಲುವನ್ನು ದಾಖಲಿಸಿದೆ. ODI ವಿಶ್ವಕಪ್‌ನಲ್ಲಿ ರನ್‌’ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ವಿಶ್ವದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ.

    World Cup 2023, Team India: ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. 48 ವರ್ಷಗಳ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಟಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 302 ರನ್‌’ಗಳ ಬೃಹತ್ ಅಂತರದಿಂದ ಸೋಲಿಸಿತು. ಈ ಮೂಲಕ ಇತಿಹಾಸ ನಿರ್ಮಿಸಿದೆ. ಇದು ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ತಂಡದ ರನ್‌’ಗಳ ವಿಷಯದಲ್ಲಿ ಎರಡನೇ ಅತಿ ದೊಡ್ಡ ಗೆಲುವಿನ ದಾಖಲೆಯಾಗಿದೆ.

    48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಭಾರತ 302 ರನ್‌’ಗಳಿಂದ ಎರಡನೇ ಅತಿ ದೊಡ್ಡ ಗೆಲುವನ್ನು ದಾಖಲಿಸಿದೆ. ODI ವಿಶ್ವಕಪ್‌ನಲ್ಲಿ ರನ್‌’ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ವಿಶ್ವದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಅಕ್ಟೋಬರ್ 25 ರಂದು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 2023 ಆವೃತ್ತಿಯಲ್ಲಿ ಆಸ್ಟ್ರೇಲಿಯಾ ನೆದರ್ಲೆಂಡ್ಸ್ ತಂಡವನ್ನು 309 ರನ್‌’ಗಳಿಂದ ಸೋಲಿಸಿತ್ತು. ಇದು ವಿಶ್ವಕಪ್‌ ಇತಿಹಾಸದಲ್ಲಿ ಅತಿದೊಡ್ಡ ಗೆಲುವಿನ ವಿಶ್ವ ದಾಖಲೆಯಾಗಿದೆ.

    ಇದಕ್ಕೂ ಮುನ್ನ 2015ರ ಮಾರ್ಚ್‌’ನಲ್ಲಿ ನಡೆದ ವಿಶ್ವಕಪ್‌’ನಲ್ಲಿ ಆಸ್ಟ್ರೇಲಿಯಾ ಅಫ್ಘಾನಿಸ್ತಾನವನ್ನು 275 ರನ್‌’ಗಳಿಂದ ಸೋಲಿಸಿತ್ತು. ಭಾರತ ಈ ಹಿಂದೆ ಮಾರ್ಚ್ 2007 ರಲ್ಲಿ ವಿಶ್ವಕಪ್‌’ನಲ್ಲಿ ಬರ್ಮುಡಾವನ್ನು 257 ರನ್‌’ಗಳಿಂದ ಸೋಲಿಸಿತ್ತು. 2015ರ ವಿಶ್ವಕಪ್‌’ನಲ್ಲಿ ದಕ್ಷಿಣ ಆಫ್ರಿಕಾ ಕೂಡ ವೆಸ್ಟ್‌ ಇಂಡೀಸ್‌ ತಂಡವನ್ನು ಇಷ್ಟೇ ರನ್‌ಗಳ ಅಂತರದಿಂದ ಸೋಲಿಸಿತ್ತು.

    ODI ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು (ರನ್‌’ಗಳ ವಿಷಯದಲ್ಲಿ)

    1. ಆಸ್ಟ್ರೇಲಿಯಾ vs ನೆದರ್ಲೆಂಡ್ಸ್ – ಆಸ್ಟ್ರೇಲಿಯಾಗೆ 309 ರನ್‌’ಗಳ ಗೆಲುವು (2023 ವಿಶ್ವಕಪ್)

    2. ಭಾರತ vs ಶ್ರೀಲಂಕಾ – ಭಾರತ 302 ರನ್‌’ಗಳ ಗೆಲುವು (2023 ವಿಶ್ವಕಪ್)

    3. ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ – ಆಸ್ಟ್ರೇಲಿಯಾ 275 ರನ್‌’ಗಳ ಗೆಲುವು (2015 ವಿಶ್ವಕಪ್)

    4. ಭಾರತ vs ಬರ್ಮುಡಾ – ಭಾರತ 257 ರನ್‌’ಗಳ ಗೆಲುವು (2007 ವಿಶ್ವಕಪ್)

    5. ದಕ್ಷಿಣ ಆಫ್ರಿಕಾ vsವೆಸ್ಟ್ ಇಂಡೀಸ್ – ದಕ್ಷಿಣ ಆಫ್ರಿಕಾ 257 ರನ್‌’ಗಳ ಗೆಲುವು (2015 ವಿಶ್ವಕಪ್)

    6. ಆಸ್ಟ್ರೇಲಿಯಾ vs ನಮೀಬಿಯಾ – ಆಸ್ಟ್ರೇಲಿಯಾ 256 ರನ್‌’ಗಳ ಗೆಲುವು (2003 ವಿಶ್ವಕಪ್)

    ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತದ ಅತಿ ದೊಡ್ಡ ಗೆಲುವಿನ ದಾಖಲೆ:

    ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌’ನ ಇತಿಹಾಸದಲ್ಲಿ ರನ್‌ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ದಾಖಲೆ ಭಾರತದ ಹೆಸರಿನಲ್ಲಿದೆ. 2023ರ ಜನವರಿಯಲ್ಲಿ ತಿರುವನಂತಪುರಂನಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತ ಶ್ರೀಲಂಕಾವನ್ನು 317 ರನ್‌’ಗಳ ಬೃಹತ್ ಅಂತರದಿಂದ ಸೋಲಿಸಿತ್ತು. ಆಸ್ಟ್ರೇಲಿಯ ನೆದರ್ಲೆಂಡ್ಸ್ ವಿರುದ್ಧ 309 ರನ್‌ಗಳ ಬೃಹತ್ ಅಂತರದ ಗೆಲುವು ಸಾಧಿಸಿದ್ದು, ಇದು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ವಿಷಯದಲ್ಲಿ ಎರಡನೇ ಅತಿ ದೊಡ್ಡ ಗೆಲುವಾಗಿದೆ.

    ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು (ರನ್‌’ಗಳ ವಿಷಯದಲ್ಲಿ)

    • ಭಾರತ vs ಶ್ರೀಲಂಕಾ – ಭಾರತ 317 ರನ್‌’ಗಳ ಗೆಲುವು (2023)
    • ಆಸ್ಟ್ರೇಲಿಯಾ vs ನೆದರ್ಲೆಂಡ್ಸ್ – ಆಸ್ಟ್ರೇಲಿಯಾ 309 ರನ್‌’ಗಳ ಗೆಲುವು (2023)
    • ಜಿಂಬಾಬ್ವೆ vs ಯುಎಇ – ಜಿಂಬಾಬ್ವೆ 304 ರನ್‌’ಗಳ ಗೆಲುವು (2023)
    • ಭಾರತ vs ಶ್ರೀಲಂಕಾ – ಭಾರತ 302 ರನ್‌’ಗಳ ಗೆಲುವು (2023)
    • ನ್ಯೂಜಿಲೆಂಡ್ vs ಐರ್ಲೆಂಡ್ – ನ್ಯೂಜಿಲೆಂಡ್ 290 ರನ್‌’ಗಳ ಗೆಲುವು (2008)
    • ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ – ಆಸ್ಟ್ರೇಲಿಯಾ 275 ರನ್‌’ಗಳ ಗೆಲುವು (2015)

    Source : https://zeenews.india.com/kannada/sports/world-cup-2023/india-has-made-history-in-the-world-of-cricket-second-highest-run-scoring-record-by-any-team-168216

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • ರೋಸ್ ವಾಟರ್ ನಿಂದ ಒತ್ತಡ ಮತ್ತು ತಲೆನೋವನ್ನು ಕಡಿಮೆ ಮಾಡಬಹುದು.! ಹೇಗೆ ಗೊತ್ತೆ..?

    Rose Water Health benefits : ಪ್ರತಿದಿನ ರೋಸ್ ವಾಟರ್‌ನಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರಲ್ಲಿರುವ ಅಂಶಗಳು ಒತ್ತಡವನ್ನು ಸುಲಭವಾಗಿ ನಿಯಂತ್ರಿಸುತ್ತವೆ. ಆದ್ದರಿಂದ ಪ್ರತಿದಿನ ಈ ನೀರನ್ನು ಬಳಸುವುದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

    Rose Water : ಚರ್ಮವನ್ನು ರಕ್ಷಿಸುವ ಸಲುವಾಗಿ, ಅನೇಕ ಜನರು ರೋಸ್ ವಾಟರ್ ಸೌಂದರ್ಯವರ್ಧಕವನ್ನು ಬಳಸುತ್ತಾರೆ. ರೋಸ್ ವಾಟರ್ ನಲ್ಲಿ ತ್ವಚೆಗೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಇರುವುದರಿಂದ ಇದನ್ನು ಪ್ರತಿದಿನ ತ್ವಚೆಯ ಮೇಲೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದಲ್ಲದೆ, ಚರ್ಮವು ಮೃದು ಮತ್ತು ಪ್ರಕಾಶಮಾನವಾಗಿರುತ್ತದೆ. ಆದರೆ ರೋಸ್ ವಾಟರ್ ಚರ್ಮಕ್ಕೆ ಮಾತ್ರವಲ್ಲದೇ ದೇಹಕ್ಕೂ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. 

    ಹೌದು.. ಚಳಿಗಾಲದ ಕಾರಣ ತೇವಾಂಶ ಹೆಚ್ಚಾಗುವುದರಿಂದ ಅನೇಕರಲ್ಲಿ ಕಣ್ಣಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ತೇವಾಂಶದಿಂದಾಗಿ ಕೆಲವರಿಗೆ ಕಣ್ಣಿನ ತುರಿಕೆ, ಕಣ್ಣು ಕೆಂಪಾಗುವುದು ಸೇರಿದಂತೆ ಮುಂತಾದ ಸಮಸ್ಯೆಗಳಿರುತ್ತವೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ರೋಸ್ ವಾಟರ್ ಅನ್ನು ಕಣ್ಣಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

    ರೋಸ್ ವಾಟರ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಗುಣಲಕ್ಷಣಗಳು ಗಾಯಗಳನ್ನು ಗುಣಪಡಿಸಲು ಸಹ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಪ್ರತಿದಿನ ಈ ನೀರಿನಿಂದ ಗಾಯಗಳನ್ನು ತೊಳೆದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದಲ್ಲದೇ ನೋವಿನಿಂದಲೂ ಸುಲಭವಾಗಿ ಪಾರಾಗಬಹದು ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಪ್ರತಿದಿನ ರೋಸ್ ವಾಟರ್ ಬಳಸುವುದರಿಂದ ಮಾನಸಿಕ ಸ್ಥಿತಿ ಸುಧಾರಿಸುತ್ತದೆ. 

    ಆಗಾಗ್ಗೆ ಖಿನ್ನತೆಯ ಒತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಈ ರೋಸ್ ವಾಟರ್ ಅನ್ನು ಪ್ರತಿದಿನ ಬಳಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಆಗಾಗ್ಗೆ ಉಸಿರಾಟದ ತೊಂದರೆ ಇರುವವರಿಗೆ ಈ ನೀರು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ಇದು ತಲೆನೋವನ್ನು ಕಡಿಮೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಪದೇ ಪದೇ ಮೈಗ್ರೇನ್ ಪೀಡಿತರು ಪ್ರತಿದಿನ ಇದರ ವಾಸನೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.

    ಸೂಚನೆ : ಈ ಮೇಲೆ ನೀಡಿರುವ ಮಾಹಿತಿ ಮನೆಮದ್ದು ಆಧಾರಿತವಾಗಿದ್ದು, ಸಮಗ್ರ ಸುದ್ದಿ ಇದನ್ನು ಸ್ಪಷ್ಟಪಡಿಸುವುದಿಲ್ಲ. ಸಲಹೆಗಳನ್ನು ಪಾಲಿಸುವ ಮೊದಲು ವೈಧ್ಯರನ್ನು ಸಂಪರ್ಕಿಸುವುದು ಉತ್ತಮ.

    Source : https://zeenews.india.com/kannada/health/rose-water-for-headache-and-stress-and-migraines-168195

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • ಚಿಕನ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.. ಆದರೆ ʼಹೀಗೆʼ ತಿಂದರೆ ಮಾತ್ರ..! ಹೇಗೆ..?

    Chicken health benefits : ನಾನ್ ವೆಜ್ ಪ್ರಿಯರು ಚಿಕನ್ ಅನ್ನು ಹೆಚ್ಚು ಇಷ್ಟಪಡುತ್ತಾರೆ. ಕೆಲವರು ವೀಕೆಂಡ್ ಬಂತೆಂದರೆ ಸಾಕು.. ಚಿಕನ್ ಬಿರಿಯಾನಿ ತಂದು ಭರ್ಜರಿ ಭೋಜನ ಮಾಡ್ತಾರೆ. ಆದರೆ ಚಿಕನ್‌ ಎಷ್ಟು ಒಳ್ಳೆಯದೋ ಅತಿಯಾಗಿ ತಿಂದ್ರೆ ಅಷ್ಟೇ ಆರೋಗ್ಯಕ್ಕೆ ಕೆಟ್ಟದ್ದು.   ಕೆಳಗೆ ನೀಡಿರುವ ವಿಧಾನದಲ್ಲಿ ತಿಂದ್ರೆ ನಿಮ್ಗೆ ಯಾವುದೋ ತೊಂದರೆಯಾಗಲ್ಲ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ.

    Healthy chicken recipes : ಚಿಕನ್ ತಿನ್ನದೇ ಇರುವವರ ಸಂಖ್ಯೆ ಬಹಳ ಕಡಿಮೆ. ಸಂಡೆ ಬಂದ್ರೆ ಸಾಕು ಮಾಂಸ ಪ್ರಿಯರ ಮನೆಯಲ್ಲಿ ಮಸಲಾ ಘಮ್‌ ಎನ್ನುತ್ತಿರುತ್ತದೆ. ಕೆಲವರು ಚಿಕನ್ ಸೂಪ್ ಅನ್ನು ಆಲೂಗಡ್ಡೆಯೊಂದಿಗೆ ತಿನ್ನುವ ಹಳೆಯ ಸಂಪ್ರದಾಯವನ್ನು ಹೊಂದಿದ್ದಾರೆ. ಬೇರೆ ಯಾವುದೇ ಮಾಂಸಕ್ಕಿಂತ ಹೆಚ್ಚಾಗಿ ಜನ ಚಿಕನ್ ಅನ್ನು ಸೇವಿಸುತ್ತಾರೆ. ರುಚಿ ಮತ್ತು ಆರೋಗ್ಯದ ವಿಷಯದಲ್ಲಿ, ಕೋಳಿ ಇತರ ಮಾಂಸಗಳಿಗಿಂತ ಹೆಚ್ಚು ವೇಗವಾಗಿ ಜೀರ್ಣವಾಗುತ್ತದೆ. 

    ಆದರೆ ಈ ಕೋಳಿ ಮಾಂಸವನ್ನು ಹೇಗೆ ತಿನ್ನುವುದು..? ಕೋಳಿ ಮಾಂಸವನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಆದರೆ ಈ ಮಾಂಸವನ್ನು ಎಣ್ಣೆ ಮತ್ತು ಮಸಾಲೆಗಳೊಂದಿಗೆ ಕುದಿಸಿ ತಿಂದರೆ ಯಾವುದೇ ಪ್ರಯೋಜನವಿಲ್ಲ. ಹಾಗೇ ಬೇಯಿಸಿ ತಿಂದ್ರೆ ದೇಹಕ್ಕೆ ಉತ್ತಮ ಎಂದು ತಜ್ಞರು ನಂಬುತ್ತಾರೆ.

    ಈ ಕಾರಣಕ್ಕಾಗಿ, ದೇಹವು ಅನಾರೋಗ್ಯದಿಂದ ಬಳಲುತ್ತಿರುವಾಗ, ಬಾಲ್ಯದಲ್ಲಿ, ತಾಯಿ ಮತ್ತು ಅಜ್ಜಿಯರು ಮಾಂಸವನ್ನು ಬೇಯಿಸಿ ತಿನ್ನುತ್ತಿದ್ದರು. ಈ ಖಾದ್ಯವು ಇನ್ನೂ ಅನೇಕ ಮನೆಗಳಲ್ಲಿ ಜನಪ್ರಿಯವಾಗಿದೆ. ಅಷ್ಟೇ ಅಲ್ಲ, ಅನೇಕ ಮನೆಗಳಲ್ಲಿ ಮಾಂಸವನ್ನು ನೀರಿನಲ್ಲಿ ಕುದಿಸಿ ಉಪ್ಪಿನೊಂದಿಗೆ ತಿನ್ನುತ್ತಾರೆ. ಬೇಯಿಸಿದ ಮಾಂಸವನ್ನು ತಿನ್ನುವುದನ್ನು ಕೇಳಿದರೆ ಹೆಚ್ಚಿನವರು ಮೂಗು ತಿರುಗಿಸುತ್ತಾರೆ. ಈ ಬೇಯಿಸಿದ ಕೋಳಿಯ ಗುಣಮಟ್ಟ ಅವರಿಗೆ ತಿಳಿದಿಲ್ಲದಿರಬಹುದು.

    ಕೋಳಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಇದು ದೇಹಕ್ಕೆ ವಿಶೇಷ ಪೋಷಣೆಯನ್ನು ನೀಡುತ್ತದೆ. ಕೋಳಿ ಮಾಂಸವನ್ನು ಕುದಿಸಿದಾಗ ಅದರಿಂದ ಕೊಬ್ಬು ಹೊರಬರುತ್ತದೆ. ಅದು ಪ್ರೋಟೀನ್‌ಯುಕ್ತವಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಬಲಪಡಿಸುತ್ತದೆ. ಚಿಕನ್‌ನಲ್ಲಿರುವ ಪ್ರೋಟೀನ್ ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

    ಸ್ನಾಯುಗಳ ಬೆಳವಣಿಗೆಗೆ ಬೇಯಿಸಿದ ಚಿಕನ್ ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ. ಕೋಳಿಯಲ್ಲಿರುವ ಪ್ರೋಟೀನ್ ಸ್ನಾಯುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇಯಿಸಿದ ಚಿಕನ್ ತೂಕ ನಷ್ಟಕ್ಕೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಕೋಳಿಯನ್ನು ಕುದಿಸಿದಾಗ ಅದರಲ್ಲಿರುವ ಕೊಬ್ಬು ಮತ್ತು ಎಣ್ಣೆ ಹೊರಬರುತ್ತದೆ. ಅಷ್ಟೇ ಅಲ್ಲ, ಬೇಯಿಸಿದ ಚಿಕನ್ ಕ್ಯಾಲೊರಿಗಳನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

    ಚಿಕನ್ ಕರಿ ಅಥವಾ ಫ್ರೈಡ್ ಚಿಕನ್ ನಂತಹ ಆಹಾರಗಳು ಜೀರ್ಣಿಸಿಕೊಳ್ಳಲು ಕಷ್ಟ. ಅವು ಹೆಚ್ಚು ಎಣ್ಣೆ ಮತ್ತು ಮಸಾಲೆಗಳನ್ನು ಹೊಂದಿರುತ್ತವೆ. ಬೇಯಿಸಿದ ಚಿಕನ್ ಜೀರ್ಣಿಸಿಕೊಳ್ಳಲು ಸುಲಭ. ಹಾಗಾಗಿ ಆರೋಗ್ಯ ಪ್ರಜ್ಞೆಯುಳ್ಳವರು ತಮ್ಮ ಆಹಾರದಲ್ಲಿ ಬೇಯಿಸಿದ ಕೋಳಿಯನ್ನು ಸೇರಿಸಿಕೊಳ್ಳುತ್ತಾರೆ.

    ಕೋಳಿ ಮಾಂಸವು ಅನೇಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ವಿಟಮಿನ್ ಬಿ 6 ಮತ್ತು ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ, ಇದು ಜೀವಕೋಶಗಳನ್ನು ಆರೋಗ್ಯಕರವಾಗಿಡಲು ಅವಶ್ಯಕವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಲವಾದ ಮೂಳೆಗಳನ್ನು ನಿರ್ಮಿಸುವಲ್ಲಿ ಪ್ರೋಟೀನ್ ಪ್ರಮುಖ ಅಂಶವಾಗಿದೆ. ಕೋಳಿ ಮಾಂಸವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. 

    Source : https://zeenews.india.com/kannada/health/healthy-way-to-eat-chichen-daily-in-kannada-168160

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • ಫಿಟ್​​ನೆಸ್​​ ಕಾಪಾಡಿಕೊಳ್ಳಲು ಯಾವಾಗ ವ್ಯಾಯಾಮ ಮಾಡಬೇಕು? ಬೆಳಿಗ್ಗೆ ಅಥವಾ ಸಂಜೆ?

    Health: ಒತ್ತಡದ ಜೀವನದ ಮಧ್ಯೆ ಪ್ರತೀ ದಿನ ಕನಿಷ್ಟ 30 ನಿಮಿಷವಾದರೂ ವ್ಯಾಯಾಮಗಳಿಗೆ ಸಮಯ ಮೀಸಲಿಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಕೆಲವರು ಹಗಲಿನಲ್ಲಿ ವ್ಯಾಯಾಮ ಮಾಡಲು ಇಷ್ಟಪಡುತ್ತಾರೆ, ಇನ್ನು ಕೆಲವರು ಸಂಜೆಯ ಹೊತ್ತು ವ್ಯಾಯಾಮ ಮಾಡಲು ಸಮಯ ಮೀಸಲಿಡುತ್ತಾರೆ. ಆದ್ದರಿಂದ ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

    ವ್ಯಾಯಾಮ ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ. ಹೆಚ್ಚಿನ ಜನರಿಗೆ ವ್ಯಾಯಾಮ ಮಾಡಲು ಸಾಕಷ್ಟು ಸಮಯ ಇರುವುದಿಲ್ಲ ಮತ್ತು ಆದ್ದರಿಂದ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಯಾಮ ಮಾಡುತ್ತಾರೆ. ಕೆಲವರು ಹಗಲಿನಲ್ಲಿ ವ್ಯಾಯಾಮ ಮಾಡಲು ಇಷ್ಟಪಡುತ್ತಾರೆ, ಇನ್ನು ಕೆಲವರು ಸಂಜೆಯ ಹೊತ್ತು ವ್ಯಾಯಾಮ ಮಾಡಲು ಸಮಯ ಮೀಸಲಿಡುತ್ತಾರೆ. ಆದ್ದರಿಂದ ಬೆಳಿಗ್ಗೆ ಅಥವಾ ಸಂಜೆ ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

    ಯಾವ ಸಮಯದಲ್ಲಿ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆಗೆ ಯೋಗ ತಜ್ಞರಾದ ಮಹಾಕ್ ದೀಪ್ ಅವರು ಕೆಲವು ಸಲಹೆ ನೀಡಿದ್ದಾರೆ.

    ಬೆಳಿಗ್ಗೆ ವ್ಯಾಯಾಮ ಮಾಡುವುದು:

    ಬೆಳಗಿನ ವ್ಯಾಯಾಮವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಇದರೊಂದಿಗೆ ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ. ಆದ್ದರಿಂದ ಬೆಳಗಿನ ವ್ಯಾಯಾಮವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ.

    ಸಂಜೆ ವ್ಯಾಯಾಮ ಮಾಡುವುದು:

    ಸಂಜೆಯ ವ್ಯಾಯಾಮವು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಸಂಜೆ ವ್ಯಾಯಾಮ ಮಾಡುವುದರಿಂದ, ವ್ಯಕ್ತಿಯು ಒತ್ತಡದಿಂದ ಮುಕ್ತನಾಗುತ್ತಾನೆ ಮತ್ತು ದಿನದ ಸವಾಲುಗಳಿಂದ ಪರಿಹಾರವನ್ನು ಪಡೆಯುವ ಅವಕಾಶವನ್ನು ಪಡೆಯುತ್ತಾನೆ. ಶಕ್ತಿ ಮತ್ತು ನಮ್ಯತೆಯ ಮೇಲೆ ಹೆಚ್ಚು ಗಮನಹರಿಸುವವರಿಗೆ ಸಂಜೆಯ ವ್ಯಾಯಾಮ ಹೆಚ್ಚು ಪ್ರಯೋಜನಕಾರಿಯಾಗಿದೆ.

    ಆದ್ದರಿಂದ ಒತ್ತಡದ ಜೀವನದಲ್ಲಿ ಪ್ರತೀ ದಿನ ಕನಿಷ್ಟ 30 ನಿಮಿಷವಾದರೂ ವ್ಯಾಯಾಮಗಳಿಗೆ ಸಮಯ ಮೀಸಲಿಡಿ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಬೆಳಿಗ್ಗೆ 6ರಿಂದ 7 ಗಂಟೆಯ ನಡುವೆ ಹಾಗೂ ಸಂಜೆಯ ಹೊತ್ತು 5.30ರಿಂದ 6.30ರ ಒಳಗಡೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಇದು ನಿಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.

    Source : https://tv9kannada.com/lifestyle/the-best-time-of-day-to-exercise-checkout-more-details-here-aks-707823.html

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • ನೀತಾ ಅಂಬಾನಿ 60ನೇ ಜನ್ಮ ದಿನಾಚರಣೆ; 1.4 ಲಕ್ಷ ಜನರಿಗೆ ಪಡಿತರ ಕಿಟ್ ವಿತರಣೆ, ಅನ್ನ ಸಂತರ್ಪಣೆ

    ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಬುಧವಾರ ಅರ್ಥಪೂರ್ಣವಾಗಿ ನಡೆಯಿತು. ಕರ್ನಾಟಕದ ಹೆಸರಘಟ್ಟ ಹಾಗೂ ರಾಮನಗರದ ಕುತಕಲ್ ಗ್ರಾಮದ ಇರುಳಿಗರ ದೊಡ್ಡಿಯೂ ಸೇರಿದಂತೆ ದೇಶದಾದ್ಯಂತ 1.4 ಲಕ್ಷ ಜನರಿಗೆ ಅನ್ನ ಸಂತರ್ಪಣೆ ಸೇವೆಯನ್ನು ಸಲ್ಲಿಸಲಾಯಿತು.

    ಮುಂಬೈ: ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಅವರ 60ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಬುಧವಾರ ಅರ್ಥಪೂರ್ಣವಾಗಿ ನಡೆಯಿತು. ಕರ್ನಾಟಕದ ಹೆಸರಘಟ್ಟ ಹಾಗೂ ರಾಮನಗರದ ಕುತಕಲ್ ಗ್ರಾಮದ ಇರುಳಿಗರ ದೊಡ್ಡಿಯೂ ಸೇರಿದಂತೆ ದೇಶದಾದ್ಯಂತ 1.4 ಲಕ್ಷ ಜನರಿಗೆ ಅನ್ನ ಸಂತರ್ಪಣೆ ಸೇವೆಯನ್ನು ಸಲ್ಲಿಸಲಾಯಿತು.

    ಮಾನವೀಯತೆಯ ಸೇವೆಯಲ್ಲಿ ಅನೇಕ ರೂಪಗಳು ಇವೆ. ಆ ಪೈಕಿ ಅನ್ನದಾನ ಅಥವಾ ಅನ್ನ ಸಂತರ್ಪಣೆಗೆ ವಿಶೇಷ ಸ್ಥಾನವಿದೆ. ಆ ಕಾರಣದಿಂದಲೇ ತಮ್ಮ ಜನ್ಮದಿನದಂದು ಅನ್ನ ಸಂತರ್ಪಣೆ ಮತ್ತು ದಿನಬಳಕೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

    ನೀತಾ ಅಂಬಾನಿ ಅವರು ತಮ್ಮ ದೈನಂದಿನ ಜೀವನದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸೇವೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಇನ್ನು ತಮ್ಮ ಅರವತ್ತನೇ ಹುಟ್ಟುಹಬ್ಬದ ದಿನದಂದು ದೇಶದಾದ್ಯಂತ 75,000ಕ್ಕೂ ಹೆಚ್ಚು ಅಶಕ್ತ ಜನರಿಗೆ ಬಿಸಿಯೂಟವನ್ನು ಉಣಬಡಿಸಲಾಗಿದೆ. ಅಂದ ಹಾಗೆ ನೀತಾ ಅಂಬಾನಿ ಅವರ ಸೇವಾ ಕೈಂಕರ್ಯ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಲೇ ಇದೆ. ಆರಂಭದಲ್ಲೇ ಹೇಳಿದಂತೆ ರಿಲಯನ್ಸ್ ಫೌಂಡೇಷನ್ ಸ್ಥಾಪಕಿಯಾಗಿ, ಅಧ್ಯಕ್ಷೆಯಾಗಿ ಅವರ ಸೇವೆ ವ್ಯಾಪಕವಾಗಿ ಹರಡಿಕೊಂಡಿದೆ. ಅದರ ವಿಸ್ತರಣೆ ಎಂಬಂತೆ ಜನ್ಮದಿನದ ಸಂದರ್ಭದಲ್ಲಿ ಅನ್ನ ಸಂತರ್ಪಣೆ, ದಿನಸಿ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಯಿತು.

    ಪಡಿತರದ ಕಿಟ್ ಗಳನ್ನು 60,000ಕ್ಕೂ ಹೆಚ್ಚು ಜನರಿಗೆ ವಿತರಿಸಲಾಯಿತು. ಭಾರತದ ಹದಿನೈದು ರಾಜ್ಯಗಳಲ್ಲಿ ಮಕ್ಕಳಿಗೆ, ವೃದ್ಧಾಶ್ರಮದಲ್ಲಿ ಇರುವಂಥ ಹಿರಿಯರಿಗೆ, ದಿನಗೂಲಿ ನೌಕರರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಕುಷ್ಠರೋಗದಂಥ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ವಿಶೇಷ ಅಗತ್ಯ ಇರುವಂಥ ಜನರಿಗೆ ಬುಧವಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಡೀ ದಿನ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಆಹಾರ ಕಿಟ್ ವಿತರಣೆ ಶುರುವಾಯಿತು. ವಿವಿಧ ಸ್ಥಳಗಳಲ್ಲಿ ಆಹಾರವನ್ನು ನೀಡಲಾಯಿತು. ರಿಲಯನ್ಸ್ ನ ಸ್ವಯಂ ಸೇವಕರು ಮಕ್ಕಳು ಮತ್ತು ವೃದ್ಧರಿಗೆ ಆಹಾರ ಬಡಿಸುವಂಥ ಕೆಲಸಕ್ಕೆ ತಾವೇ ಮುಂದಾದರು.

    ನೀತಾ ಅಂಬಾನಿ ಅವರಿಗೆ ಮಹಿಳೆಯರು ಮತ್ತು ಮಕ್ಕಳ ಬೇಗ ವಿಶೇಷ ಅಕ್ಕರೆ, ಆಸ್ಥೆ. ತಮ್ಮ ಹೃದಯಕ್ಕೆ ಮಹಿಳೆಯರು, ಮಕ್ಕಳು ಎಷ್ಟು ಹತ್ತಿರ ಎಂಬುದನ್ನು ಸ್ವತಃ ನೀತಾ ಅಂಬಾನಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ 3000 ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    No description available.

    (ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರ 60ನೇ ಜನ್ಮ ದಿನಾಚರಣೆ ಪ್ರಯುಕ್ತ ಬುಧವಾರ ರಾಮನಗರದ ಕುತಕಲ್ ಗ್ರಾಮದ ಇರುಳಿಗರ ದೊಡ್ಡಿಯಲ್ಲಿ ಆಹಾರ ಕಿಟ್ ವಿತರಿಸಲಾಯಿತು.)

    ಶಿಕ್ಷಣ, ಮಹಿಳಾ ಸಬಲೀಕರಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರಕ್ಕೆ ನೀತಾ ಅಂಬಾನಿಯವರ ಕೊಡುಗೆಗಳು ಭಾರತದ ಸಾಮಾಜಿಕ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಅವರ ದೂರದೃಷ್ಟಿಯ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇನ್ ಮೂಲಕ ದೇಶಾದ್ಯಂತ 71 ಮಿಲಿಯನ್ ಜೀವಗಳನ್ನು ಮುಟ್ಟಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಅನ್ನ ಸೇವೆಯು ಅವರ ಜನ್ಮದಿನದ ಅರ್ಥಪೂರ್ಣ ಆಚರಣೆಗೆ ಸಾಕ್ಷಿ ಆಯಿತು.’ಮೈತ್ರೀಂ ಭಜತಾ ಅಖಿಲ ಹೃತ್ ಜೈತ್ರೀಂ’ – ಇದು ಸಾಮರಸ್ಯ, ಸ್ನೇಹ, ಸ್ವಯಂ ಮತ್ತು ಪ್ರಪಂಚದ ಬಗ್ಗೆ ಇರುವಂಥ ಕಾಳಜಿಯ ಪ್ರಮಾಣವನ್ನು ಹೇಳುತ್ತವೆ. ನವೆಂಬರ್ 1ರ ಕಾರ್ಯಕ್ರಮಗಳು ಇದನ್ನು ಉತ್ತೇಜಿಸಿದವು.

    Source : https://zeenews.india.com/kannada/india/nita-ambanis-60th-birthday-celebration-distribution-of-ration-kit-rice-donation-to-1-4-lakh-people-168125

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • Daily GK Quiz: ಕಲಿಯುಗ ಕೊನೆಗೊಳ್ಳಲು ಎಷ್ಟು ವರ್ಷಗಳು ಬಾಕಿ ಉಳಿದಿವೆ..?

    Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

    General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

    ಪ್ರಶ್ನೆ 1 – ಚಳಿಯಲ್ಲಿಯೂ ಕರಗುವ ವಸ್ತು ಯಾವುದು?

    ಉತ್ತರ 1 – ಆ ವಸ್ತುವೇ ಮೇಣದಬತ್ತಿ. ಇದು ಯಾವುದೇ ಋತುವಿನಲ್ಲಿಯೂ ಕರಗುತ್ತದೆ.

    ಪ್ರಶ್ನೆ 2 – ಯಾವ ಹಣ್ಣು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ?

    ಉತ್ತರ 2 – ನಿಂಬೆಗೆ ಬ್ಯಾಕ್ಟೀರಿಯಾವನ್ನು ಕೊಲ್ಲುವ ಸಾಮರ್ಥ್ಯವಿದೆ.

    ಪ್ರಶ್ನೆ 3 – ಯಾವ ದೇಶವನ್ನು ಲಿಟಲ್ ಇಂಡಿಯಾ ಎಂದು ಕರೆಯಲಾಗುತ್ತದೆ?

    ಉತ್ತರ 3 – ಫಿಜಿಯನ್ನು ಲಿಟಲ್ ಇಂಡಿಯಾ ಎಂದು ಕರೆಯಲಾಗುತ್ತದೆ.

    ಪ್ರಶ್ನೆ 4 – ಪಾಕಿಸ್ತಾನದ ರಾಷ್ಟ್ರೀಯ ಸಿಹಿ ಯಾವುದು?

    ಉತ್ತರ 4 – ಪಾಕಿಸ್ತಾನದ ರಾಷ್ಟ್ರೀಯ ಸಿಹಿತಿಂಡಿ ಗುಲಾಬ್ ಜಾಮೂನ್ ಆಗಿದೆ.

    ಪ್ರಶ್ನೆ 5 – ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಭಾರತದ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗವನ್ನು ಸ್ಥಾಪಿಸಲಾಯಿತು?

    ಉತ್ತರ 5 – ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗವನ್ನು ಭಾರತದ 2ನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲಾಯಿತು.

    ಪ್ರಶ್ನೆ 6 –  ಕರ್ನಾಟಕದ ಅತಿದೊಡ್ಡ ಮೃಗಾಲಯ ಯಾವುದು..?  

    ಉತ್ತರ 6 –  ಶ್ರೀ ಚಾಮರಾಜೇಂದ್ರ ಮೃಗಾಲಯ

    ಪ್ರಶ್ನೆ 7 – ಯಾವ ಹೂವು 10 ಕೆಜಿ ತೂಗುತ್ತದೆ?

    ಉತ್ತರ 7 – ರಾಫ್ಲೆಸಿಯಾ ಹೂವು 10 ಕೆಜಿವರೆಗೆ ತೂಗುತ್ತದೆ.

    ಪ್ರಶ್ನೆ 8 – ಕಲಿಯುಗವು ಕೊನೆಗೊಳ್ಳಲು ಎಷ್ಟು ವರ್ಷಗಳು ಬಾಕಿ ಉಳಿದಿವೆ?

    ಉತ್ತರ 8 – ಈಗ ಕಲಿಯುಗ 5,125 ವರ್ಷಗಳು ಪೂರ್ಣಗೊಂಡಿವೆ. ಹೀಗಾಗಿ ಕಲಿಯುಗದ 4,32,000 ವರ್ಷಗಳ ಪೈಕಿ 4,26,875 ವರ್ಷಗಳು ಬಾಕಿ ಉಳಿದಿವೆ.

    ಪ್ರಶ್ನೆ 9- ಪಂಜಾಬ್‍ನಲ್ಲಿರುವ ಸಿಖ್ಖರ ಪವಿತ್ರ ಸ್ಥಳ ಯಾವುದು..?

    ಉತ್ತರ 9- ಅಮೃತಸರದಲ್ಲಿರುವ ಸ್ವರ್ಣ ಮಂದಿರ

    ಪ್ರಶ್ನೆ 10- ರಾಷ್ಟ್ರೀಯ ನಾಟಕ ಶಾಲೆ ಎಲ್ಲಿದೆ..?

    ಉತ್ತರ 10- 1956ರಲ್ಲಿ ದೆಹಲಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆಯನ್ನು ಸ್ಥಾಪಿಸಲಾಯಿತು.

    Source : https://zeenews.india.com/kannada/india/general-knowledge-how-many-years-are-left-for-kalyuga-to-end-168101

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

  • Bad Cooking Oils: ಸ್ಲೋ ಪಾಯ್ಸನ್​​ ಆಗಿ ಕೆಲಸ ಮಾಡುವ ಈ ನಾಲ್ಕಾರು ಅಡುಗೆ ಎಣ್ಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ?

    ಅನಾರೋಗ್ಯಕರ ಅಡುಗೆ ಎಣ್ಣೆಯನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುವ ಅಪಾಯವೂ ಇದೆ. ಕೆಟ್ಟ ಎಣ್ಣೆಯು ಮಧುಮೇಹ, ರಕ್ತದೊತ್ತಡ ಮತ್ತು ಇತರ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

    ಪೂರಿ, ಸಬ್ಜಿ, ಸಮೋಸ ಮತ್ತು ಇತರ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಅಡುಗೆ ಎಣ್ಣೆಯು ನಿಮ್ಮ ದೇಹದ ಮೇಲೆ ನಿಧಾನ ವಿಷದಂತೆ (Slow Poison) ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಖಾದ್ಯ ತೈಲವು ನಮ್ಮ ಆಹಾರದಲ್ಲಿ ಬಳಸಲಾಗುವ ವಿಶೇಷ ಆಹಾರ ಪದಾರ್ಥವಾಗಿದೆ. ಇದು ಆಹಾರವನ್ನು ರುಚಿಕರವಾಗಿಸುತ್ತದೆ. ಜೊತೆಗೆ ಆಹಾರಕ್ಕೆ ರುಚಿಯನ್ನು ಸೇರಿಸುತ್ತದೆ. ನಿಮ್ಮ ದೇಹವನ್ನು ಆರೋಗ್ಯಕರವಾಗಿಡಲು ಮತ್ತು ನಿಮ್ಮ ಆಹಾರವನ್ನು ಟೇಸ್ಟಿ ಮತ್ತು ಆರೋಗ್ಯಕರವಾಗಿಸಲು, ನೀವು ಖಾದ್ಯ ಎಣ್ಣೆಯನ್ನು ಬಹಳ ಆಲೋಚಿಸಿ ಆರಿಸಬೇಕು.

    ನೀವು ಆಯ್ಕೆ ಮಾಡುವ ಅಡುಗೆ ಎಣ್ಣೆಯು ನಿಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಕೆಟ್ಟ ಎಣ್ಣೆಯ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವೂ ದ್ವಿಗುಣಗೊಳ್ಳುತ್ತದೆ. ಅನಾರೋಗ್ಯಕರ ಅಡುಗೆ ಎಣ್ಣೆಯನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುವ ಅಪಾಯವೂ ಇದೆ. ಕೆಟ್ಟ ಎಣ್ಣೆಯು ಮಧುಮೇಹ, ರಕ್ತದೊತ್ತಡ ಮತ್ತು ಇತರ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

    ಸಂಸ್ಕರಿಸಿದ ತೈಲಗಳು ಸೇರಿದಂತೆ ಅನೇಕ ತೈಲಗಳು ನಿಧಾನ ವಿಷದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ತೈಲಗಳನ್ನು ಫಿಲ್ಟರ್ ಮಾಡುವಾಗ ವಿವಿಧ ರಾಸಾಯನಿಕಗಳು ಮತ್ತು ಸುಗಂಧ ದ್ರವ್ಯಗಳನ್ನು ಸೇರಿಸುತ್ತಾರೆ. ಇಂತಹ ತೈಲಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ನಮ್ಮ ಆರೋಗ್ಯಕ್ಕೆ ವಿಷಕಾರಿಯಾದ 4 ಅಡುಗೆ ಎಣ್ಣೆಗಳ ಬಗ್ಗೆ ಇಲ್ಲಿ ತಿಳಿಯೋಣ.

    ತಾಳೆ ಎಣ್ಣೆಯಿಂದ..

    ಪಾಮ್ ಆಯಿಲ್ ಸ್ಯಾಚುರೇಟೆಡ್ ಕೊಬ್ಬಿನಲ್ಲಿ ಸಮೃದ್ಧವಾಗಿದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಎಣ್ಣೆಯನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸುವುದರಿಂದ ತ್ವರಿತವಾಗಿ ದೇಹ ತೂಕ ಹೆಚ್ಚಾಗುತ್ತದೆ. ಸ್ಥೂಲಕಾಯತೆ ಅತಿಯಾದಾಗ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಳದಂತಹ ದೀರ್ಘಕಾಲದ ಕಾಯಿಲೆಗಳಿಗೆ ಗುರಿಯಾಗುತ್ತಾರೆ.

    ಜೋಳದ ಎಣ್ಣೆ..

    ಸಸ್ಯಜನ್ಯ ಎಣ್ಣೆಯಂತೆ, ಜೋಳದ ಎಣ್ಣೆಯು ಹೆಚ್ಚಿನ ಮಟ್ಟದ ಒಮೆಗಾ -6 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ -6 ಕೊಬ್ಬಿನಾಮ್ಲಗಳು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ. ಒಮೆಗಾ -6 ಸೇವನೆಯನ್ನು ಸಮತೋಲನಗೊಳಿಸಲು, ನಿಮ್ಮ ಆಹಾರದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ಕಾರ್ನ್ ಎಣ್ಣೆಯ ಬಳಕೆಯನ್ನು ಮಿತಿಗೊಳಿಸಿ. ಇಲ್ಲದಿದ್ದರೆ ಬೊಜ್ಜು, ಕ್ಯಾನ್ಸರ್, ವಿಷ ಸೇವನೆ ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತವೆ.

    ಸೋಯಾಬೀನ್ ಎಣ್ಣೆಯನ್ನು ತಪ್ಪಿಸಿ

    ಸೋಯಾಬೀನ್ ಎಣ್ಣೆಯನ್ನು ಸಾಮಾನ್ಯವಾಗಿ ಸಂಸ್ಕರಿಸಿದ ಆಹಾರಗಳಲ್ಲಿ ಬಳಸಲಾಗುತ್ತದೆ. ಈ ಎಣ್ಣೆಯು ಒಮೆಗಾ -6 ಕೊಬ್ಬಿನಾಮ್ಲಗಳ ಮೂಲವಾಗಿದೆ. ಸೋಯಾಬೀನ್ ಎಣ್ಣೆಯನ್ನು ಸೇವಿಸುವುದರಿಂದ ಬೊಜ್ಜು, ಮಧುಮೇಹ, ಆಟಿಸಂ, ಆಲ್ಝೈಮರ್ಸ್, ಖಿನ್ನತೆ ಮುಂತಾದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಈ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಕೊಬ್ಬು ದೇಹಕ್ಕೆ ಹಾನಿಕಾರಕವಾಗಿದೆ.

    ಗಮನಿಸಿ, ಆಲಿವ್ ಎಣ್ಣೆ ಆರೋಗ್ಯಕರ ಆದರೆ…

    ಆಲಿವ್ ಎಣ್ಣೆಯನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸಲಾಡ್ ಮತ್ತು ಕೆಲವು ಭಕ್ಷ್ಯಗಳ ಮೇಲೆ ಈ ಎಣ್ಣೆಯನ್ನು ಚಿಮುಕಿಸುವುದರಿಂದ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಶಾಖದಲ್ಲಿ ಅಡುಗೆ ಮಾಡಲು ಈ ಎಣ್ಣೆ ಸೂಕ್ತವಲ್ಲ. ಇದು ಕಡಿಮೆ ತಾಪಮಾನದಲ್ಲಿ ಅಡುಗೆಗೆ ಸೂಕ್ತವಾಗಿದೆ. ಅಂದರೆ ಇದನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಎಚ್ಚರಿಕೆ, ಈ ಎಣ್ಣೆಯೂ ಸಹ ಮೊಡವೆಗಳು, ಚರ್ಮದ ದದ್ದುಗಳು ಅಥವಾ ದದ್ದುಗಳನ್ನು ಉಂಟುಮಾಡುತ್ತದೆ.

    Source : https://tv9kannada.com/health/bad-cooking-oil-the-4-cooking-oils-that-are-poison-to-body-they-act-like-a-slow-poison-sas-707632.html

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group : https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharechat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1