ಪ್ರಜಾಸೇವಾ ಅಭಿಯಾನಕ್ಕೆ ಉತ್ತಮ ಸ್ಪಂದನೆ: 6 ದಿನಗಳಲ್ಲಿ 13,872 ಅರ್ಜಿ ವಿಲೇವಾರಿ, ಕಂದಾಯ ಇಲಾಖೆಯಲ್ಲೇ ಅತಿ ಹೆಚ್ಚು ದೂರು.

ರಾಜ್ಯ ಸರ್ಕಾರದ ‘ಮನೆ ಬಾಗಿಲಿಗೆ ಸರ್ಕಾರ, ಇರಲಿ ನಿಮ್ಮ ಸಹಕಾರ’ ಘೋಷವಾಕ್ಯದಡಿ ಜಾರಿಗೆ ತಂದಿರುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಯಾನದಡಿ ಒಂದೇ ದಿನ 26,387 ಅಹವಾಲುಗಳು ಸ್ವೀಕಾರವಾಗಿದ್ದು, ಕೇವಲ 6 ದಿನಗಳಲ್ಲಿ ಶೇ.52.6ರಷ್ಟು (13,872) ಅರ್ಜಿಗಳನ್ನು ಯಶಸ್ವಿಯಾಗಿ ವಿಲೇವಾರಿ ಮಾಡಲಾಗಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಸಮಸ್ಯೆಗಳೇ ಹೆಚ್ಚು ಸ್ವೀಕೃತವಾದ ಅಹವಾಲುಗಳ ಪೈಕಿ ಶೇ.35ರಷ್ಟು (9,260) ದೂರುಗಳು ಕಂದಾಯ ಇಲಾಖೆಯೊಂದರಲ್ಲೇ ದಾಖಲಾಗಿವೆ. ಇದರ ಪ್ರಮುಖ ವಿವರಗಳು ಹೀಗಿವೆ:

  • ವೃದ್ಧಾಪ್ಯ ವೇತನ: 2,087 ಅರ್ಜಿಗಳು
  • ವಸತಿ ನಿವೇಶನ: 2,071 ಅರ್ಜಿಗಳು
  • ಭೂದಾಖಲೆ ಮತ್ತು ಆರ್‌ಟಿಸಿ (ಪಹಣಿ): 1,567 ಅರ್ಜಿಗಳು

ಯಾವುದೇ ಅರ್ಜಿಗಳನ್ನು ವಿಳಂಬ ಮಾಡದೆ, ಬಾಕಿ ಉಳಿದಿರುವ 12,514 ಅಹವಾಲುಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿ ಬುಧವಾರ ಅರ್ಜಿ ವಿಲೇವಾರಿಗೆ ಸಮಯ ನಿಗದಿ ಸಾರ್ವಜನಿಕರು ತಮ್ಮ ಅರ್ಜಿಗಳ ಸ್ಥಿತಿಗತಿಯನ್ನು ಖುದ್ದಾಗಿ ಪರಿಶೀಲಿಸಲು ಹಾಗೂ ತ್ವರಿತ ವಿಲೇವಾರಿಗಾಗಿ ಪ್ರತಿ ಬುಧವಾರ ವಿವಿಧ ಹಂತದ ಅಧಿಕಾರಿಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ:

  • ಬೆಳಿಗ್ಗೆ 09:00 – 11:00: ತಹಶೀಲ್ದಾರ್ ಕಚೇರಿ
  • ಬೆಳಿಗ್ಗೆ 11:00 – ಮಧ್ಯಾಹ್ನ 01:00: ಉಪವಿಭಾಗಾಧಿಕಾರಿ (AC) ಕಚೇರಿ
  • ಮಧ್ಯಾಹ್ನ 03:00 – ಸಂಜೆ 05:00: ಜಿಲ್ಲಾಧಿಕಾರಿ (DC) ಕಚೇರಿ

ಅಕ್ಟೋಬರ್ 2ರಂದು ‘ನಮ್ಮ ಸೇವಾ’ ಆ್ಯಪ್ ಲೋಕಾರ್ಪಣೆ ಸಾರ್ವಜನಿಕರು ಇನ್ನಷ್ಟು ಸುಲಭವಾಗಿ ದೂರುಗಳನ್ನು ಸಲ್ಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವಂತೆ ಪ್ರಜಾಸೇವಾ ಇಲಾಖೆಯು ‘ನಮ್ಮ ಸೇವಾ’ ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಗಾಂಧಿ ಜಯಂತಿಯಾದ ಅಕ್ಟೋಬರ್ 2ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *